ಸಂಸ್ಥೆಯ ಬಗ್ಗೆ

ಅ ಭಾ ತಾ ಶಿ ಮಂ. ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್ ವಿಷಯದಲ್ಲಿ (ವಾಣಿ) ಮೂರು ದಿನದ ಕಾರ್ಯ ಗಾರವನ್ನು "ಸುಧಾರಿತ ವಸ್ತುಗಳು, ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳು" ಉತ್ತೇಜನ ನೀಡಿದ್ದು ಸ್ಥಳಿಯ ಭಾಷೆಯಾದ ಕನ್ನಡದಲ್ಲಿ ವಿಷಯವನ್ನು ಅರ್ಥಪೂರ್ಣವಾಗಿ ಕಲಿಸಲು ಸಹಕಾರಿಯಾಗಿದೆ. ದೇಶದಲ್ಲಿ ಹೆಸರು ವಾಸಿಯಾದ ಬೆಂಗಳೂರು, ಉತ್ಪಾದನೆ ಮತ್ತು ಐ. ಟಿ ಕ್ಷೇತ್ರದಲ್ಲಿ ಗಣನೀಯ ಸೇವೆ ಯನ್ನು ನೀಡುತ್ತಿದ್ದು ಕುಶಲಮತಿಗಳು, ಸಂಶೋಧಕರು, ವಸ್ತುಗಳ ತಜ್ಞರ ವಿಷಯ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾಗಿದೆ. ಸಹಕಾರ ತತ್ವದಲ್ಲಿ ಮಾತುಕತೆಯನ್ನು ಕನ್ನಡ ಭಾಷೆಯಲ್ಲಿ ಮಾಡಿಕೊಳ್ಳಲು ಈ ಕಾರ್ಯಗಾರವು ಜ್ಞಾನಾಂತರವನ್ನು ಕಡಿಮೆ ಮಾಡುವುದು, ಭಾಷೆ ಮತ್ತು ವಿಷಯದ ಬುದ್ದಿ ಮತ್ತೆಯನ್ನು ಹೆಚ್ಚು ಮಾಡುವುದು ವಿಷಯಾರ್ಚನೆಯನ್ನು ವೇಗವರ್ಧಿಸುವುದು ಉದ್ದೇಶವಾಗಿದೆ.

ಆಹ್ವಾನವನ್ನು ಡೌನ್‌ಲೋಡ್ ಮಾಡಿ

aicte-workshop


ದಿನ ಬೆಳಗಿನ ಅಧಿವೇಶನ ಮಧ್ಯಾಹ್ನದ ಅಧಿವೇಶನ
1 ಅಧಿವೇಶನ I ಅಧಿವೇಶನ II ಅಧಿವೇಶನ III ಅಧಿವೇಶನ IV
ಡಾ. ಗೋಪಾಲಕೃಷ್ಣ ಹೆಗ್ಡೆ,
ಪ್ರಾಧ್ಯಾಪಕರು, ನ್ಯಾನೊ ವಿಭಾಗ,
ಭಾರತೀಯ ತಂತ್ರಜ್ಞಾನ ಸಂಸ್ಥೆ, ಬೆಂಗಳೂರು,
gopal.hegde@gmail.com

ವಿಷಯ: ಸುಧಾರಿತ ಬೆಳಕರಿಮೆ ವಸ್ತುಗಳು

ಡಾ. ರಮೇಶ್ ಎಮ್ ಆರ್,
ಸಹಾಯಕ ಪ್ರಾಧ್ಯಾಪಕರು,
ಯಂತ್ರಜ್ಞಾನ ವಿಭಾಗ,
ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ, ಸೂರತ್ಕಲ್, ಮಂಗಳೂರು,
rameshmr@nitk.edu.in

ವಿಷಯ: ನಿರ್ಣಾಯಕ ಖನಿಜಗಳು ಮತ್ತು ಅವುಗಳ ಅವಶ್ಯಕತೆ

ಡಾ. ಸಿದ್ಧರಾಜು ಸಿ,
ಸಹಾಯಕ ಅಧ್ಯಾಪಕರು,
ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ,
ಬೆಂಗಳೂರು,
siddaraju@msrit.edu

ವಿಷಯ: ವಿನ್ಯಾಸಕ್ಕೆ ವಸ್ತುಗಳ ಆಯ್ಕೆ

ಡಾ. ವಿಜಯರಾಘವನ್,
ನಿ. ಹಿರಿಯ ವ್ಯವಸ್ಥಾಪಕರು,
ಹಿಂದುಸ್ತಾನ್ ಏರೋನಾಟಿಕ್ಸ್ ನಿಯಮಿತ, ಬೆಂಗಳೂರು ವಿಭಾಗ,
pvrvan@gmail.com

ವಿಷಯ: ವಸ್ತುಗಳ ಪರೀಕ್ಷೆ

2 ಅಧಿವೇಶನ V ಅಧಿವೇಶನ VI ಅಧಿವೇಶನ VII ಅಧಿವೇಶನ VIII
ಡಾ. ಹರೀಶ್ ಎಮ್ ಎನ್ ಕೆ,
ಸಹಾಯಕ ಪ್ರಾಧ್ಯಾಪಕರು,
ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ,
harishmnk@acharya.ac.in

ವಿಷಯ: ಅಪರೂಪದ ಧಾತುಗಳು ಮತ್ತು ಶಕ್ತಿಯ ಸಂಗ್ರಹಣಾ ವಿಧಾನ

ಡಾ. ರವೀಂದ್ರ ಆರ್ ಎಸ್,
ಪ್ರಾಧ್ಯಾಪಕರು,
ರಸಾಯನ ಶಾಸ್ತ್ರ ವಿಭಾಗ,
ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ,
ಬೆಂಗಳೂರು,
raveendra.rs@saividya.ac.in

ವಿಷಯ: ಸಂಯುಕ್ತ ವಸ್ತುಗಳು

ಡಾ. ರಾಜೇಶ್ವರಿ,
ಪ್ರಾಂಶುಪಾಲರು,
ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ,
rajeswari@acharya.ac.in

ವಿಷಯ: ವಿದ್ಯುನ್ಮಾನ ವಸ್ತುಗಳು

ಡಾ. ಷಡಕ್ಷರಿ ಆರ್,
ಸಹಾಯಕ ಪ್ರಾಧ್ಯಾಪಕರು,
ಯಂತ್ರಜ್ಞಾನ ವಿಭಾಗ,
ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ,
shadaksharir@acharya.ac.in

ವಿಷಯ: ನ್ಯಾನೋ ವಸ್ತುಗಳು

3 ಅಧಿವೇಶನ IX ಅಧಿವೇಶನ X ಅಧಿವೇಶನ XI ಅಧಿವೇಶನ XII
ಡಾ. ಶಶಿಕಲಾ ಎ,
ಸಹಾಯಕ ಅಧ್ಯಾಪಕರು,
ಯಂತ್ರಜ್ಞಾನ ವಿಭಾಗ,
ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ,
shashikalaa@acharya.ac.in

ವಿಷಯ: ಬುದ್ಧಿವಂತ ವಸ್ತುಗಳು ಮತ್ತು ಪರೀಕ್ಷಾ ವಿಧಾನ

ಡಾ. ಪಕ್ಕೀರಪ್ಪ ಹೆಚ್,
ಪ್ರಾಧ್ಯಾಪಕರು ಮತ್ತು ಇನ್ಕುಬೇಷನ್ ಕೇಂದ್ರದ ಮುಖ್ಯಸ್ಥ,
ಯಂತ್ರಜ್ಞಾನ ವಿಭಾಗ,
ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ,
pakkirappa@acharya.ac.in

ವಿಷಯ: ಭೂಮಿಯ ಅಪರೂಪದ ವಸ್ತುಗಳು

ಶ್ರೀ ಸುನಿಲ್ ಮೈಸೂರು,
ಮುಖ್ಯ ನಿರ್ದೇಶಕರು,
ಹಿನ್ ರೆನ್ ಇಂಜಿನಿಯರಿಂಗ್ ಕಂಪನಿ,
ಮೈಸೂರು,
info@hinren.com

ವಿಷಯ: ಸೌರ ಶಕ್ತಿಯ ವಸ್ತುಗಳು ಮತ್ತು ಬಳಕೆಯ ವಿಧಾನ

ಶ್ರೀ ಶಿವಕುಮಾರ್ ಎ,
ಸಹಾಯಕ ನಿರ್ದೇಶಕರು,
ಎಂ ಎಸ್ ಎಂ ಇ ರಾಜಾಜಿನಗರ,
ಬೆಂಗಳೂರು,
dcdi-bang@dcmsme.gov.in

ವಿಷಯ: ಉದ್ಯಮಗಳಲ್ಲಿ ನಿರ್ಣಾಯಕ ವಸ್ತುಗಳು

ಕಾರ್ಯ ಗಾರದ ಧೇಯ್ಯೋದ್ದೇಶಗಳು

  • ವಸ್ತುಗಳ ಬಗ್ಗೆ ವಿಶಾಲವಲೋಕನ, ಗುಣಾವಗುಣಗಳ ಅರಿಯುವಿಕೆ.
  • ವಸ್ತುಗಳ ಇಂದಿನ ವಿದ್ಯಾಮಾನದ ಅವಲೋಕನ, ಭೌತಿಕಾತ್ಮಿಕರಸಾಯನ ಗುಣಗಳರಿಯುವಿಕೆ ಮತ್ತು ವಿಶೇಷ ರೀತಿಯ ಪ್ರಯೋಗಗಳಾದ ಕ್ಷ-ಕಿರಣ, ವಿವರ್ತನೆ, ವರ್ಣಪಟಲಮಾಪನ, ಸೂಕ್ಷ್ಮ ದರ್ಶನ ವಿದ್ಯುತ್ ವಿಶ್ಲೇಷಣಾತ್ಮಕ ತಂತ್ರಗಳ ಪರಿಚಯ.
  • ಭೌತಿಕ, ರಸಾಯನಿಕ, ವಿದ್ಯುತ್ ಮತ್ತು ಇತರೆ ಗುಣಗಳ ಅರಿಯುವಿಕೆ. ನಿರ್ದಿಷ್ಟ ಬಳಕೆಗೆ ವಸ್ತುಗಳ ಗುರುತಿಸುವಿಕೆ.
  • ಇತ್ತೀಚಿನ ದಿನಮಾನಗಳಲ್ಲಿ ವಸ್ತುಗಳ ತಂತ್ರಜ್ಞಾನ, ತಯಾರಿಸುವ ವಿಧಾನ, ಮತ್ತು ಬಳಕೆಯ ಬಗ್ಗೆ ಅರಿಯುವಿಕೆ.

ಆಯ್ಕೆಯ ನಿಯಮಗಳು

  • ಕಾರ್ಯಾಗಾರಕ್ಕೆ ಆಯ್ಕೆಯಾಗಲು ಅಧ್ಯಾಪಕರು, ಸಂಶೋಧನಾ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಧರು, ಅತಿಥೇಯ ಶಿಕ್ಷಕರು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯಿಂದ ಅನುಮೋದನೆ ಪಡೆದುಕೊಂಡ ವಿದ್ಯಾಲಯದವರಾಗಿರಬೇಕು. ಸರ್ಕಾರಿ, ಖಾಸಗಿ ಉದ್ಯಮದಲ್ಲಿರುವವರು ಭಾಗವಹಿಸಬಹುದು.
  • ಕಾರ್ಯಾಗಾರಕ್ಕೆ ಭಾಗವಹಿಸುವವರ ಸಂಖ್ಯೆ: ೫೦.
  • ನೋಂದಣಿಯನ್ನು ಮೊದಲ ಬಂದವರಿಗೆ ನೀಡಲಾಗುವುದು.
  • ಆಯ್ಕೆಯಾದವರಿಗೆ ಭಾಗವಹಿಸುವ ಬಗ್ಗೆ ದೂರವಾಣಿ /ಮಿಂಚಂಚೆ ಮೂಲಕ ತಿಳಿಸಲಾಗುವುದು. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಯಾವುದೇ ಶುಲ್ಕವಿಲ್ಲ.
  • ಭಾಗವಹಿಸಲು ಇಚ್ಚಿಸುವವರು ಕೆಳಗಿನ ಅಂತರ್ಜಾಲದ ಕೊಂಡಿಯನ್ನು ಬಳಸುವುದು ಇಲ್ಲವೆ ತ್ವರಿತ ಪ್ರತಿಕ್ರಿಯೆ ಸಂಕೇತ (QR Code) ಮೂಲಕ ನೊಂದಾಯಿಸಬಹುದು.


ಸಂಪನ್ಮೂಲ ವ್ಯಕ್ತಿಗಳು

ಸಮಿತಿಯ ಸದಸ್ಯರು

  • ಶ್ರೀ ಬಿ ಎಂ ರೆಡ್ಡಿ ಅಧ್ಯಕ್ಷರು, ಜೆ ಎಂ ಜೆ ಶಿಕ್ಷಣ ಸಂಸ್ಥೆಗಳು
  • ಶ್ರೀ ಬಿ ಪ್ರೇಮನಾಥ್ ರೆಡ್ಡಿ ಮುಖ್ಯಸ್ಥರು ಜೆ ಎಂ ಜೆ ಶಿಕ್ಷಣ ಸಂಸ್ಥೆಗಳು
  • ಶ್ರೀ ಮತಿ ಶಾಲಿನಿ ರೆಡ್ಡಿ, ಪ್ರಧಾನ ನಿರ್ದೇಶಕರು, ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ
  • ಶ್ರೀ ಕೃಷ್ಣ ಬಸಾನಿ ರೆಡ್ಡಿ,ವ್ಯವಸ್ಥಾಪಕ ನಿರ್ದೇಶಕರು, ಜೆ ಎಂ ಜೆ ಶಿಕ್ಷಣ ಸಂಸ್ಥೆಗಳು
  • ಡಾ ರಾಜೇಶ್ವರಿ ಪ್ರಾಂಶುಪಾಲರು ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ
  • ಪ್ರೊ: ಮರಿಗೌಡ ಸಿ ಕೆ, ಉಪ ಪ್ರಾಂಶುಪಾಲರು, ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ
  • ಡಾ ಮಂಜುನಾಥ ಬಿ ಮುಖ್ಯಸ್ಥರು, ತಂತ್ರಜ್ಞಾನ ವಿಭಾಗ, ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ
  • ಡಾ ನಾಗರಾಜು ಕೆ ಸಿ
  • ಡಾ ಸನ್ಮಾನ್ ಶಿವಕುಮಾರ್
  • ಪ್ರೊ ಲವಕುಮಾರ್
  • ಪ್ರೊ ವಿನೋದ್ ಕುಮಾರ್
  • ಪ್ರೊ ರಾಜು ಎಮ್ ಜಿ
  • ಪ್ರೊ ಪ್ರವೀಣ್ ಬಿ ಬಿ
  • ಪ್ರೊ ಶ್ರೀಮುಖಿ ಜಿ ಶಾಸ್ತ್ರಿ
  • ಪ್ರೊ ಅಕ್ಷಯ ಸಿಂಹ
  • ಪ್ರೊ ಶರದ್ ಕುಮಾರ್
  • ಪ್ರೊ ದಿವ್ಯಾ ಎನ್ ಸಿ
  • ಪ್ರೊ ಅತಿಥ್ ಡಿ
  • ಪ್ರೊ ಪ್ರಜ್ವಲ್ ಸಂದ್ಯಾಲ್

ಸಂಸ್ಥೆಯ ಬಗ್ಗೆ

ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ವು ೨೦೦೦ ಇಸವಿಯಲ್ಲಿ ಸ್ಥಾಪನೆಯಾಗಿದ್ದು ೧೪ ಪದವಿ, ೪ ಸ್ನಾತಕೋತ್ತರ ಮತ್ತು ೧೧ ಸಂಶೋಧನಾ ಪದವಿಗಳಲ್ಲಿ ಶಿಕ್ಷಣ ವನ್ನು ನೀಡುತ್ತಿದೆ. ವೈವಿಧ್ಯಮಯ ಶಿಕ್ಷಣ ವನ್ನು ೫೦೦೦ ವಿದ್ಯಾರ್ಥಿಗಳಿಗೆ, ಸರಿ ಸುಮಾರು ೬೦ ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಹಂಚಿ ಹೋಗಿರುವುದು ಹೆಮ್ಮೆಯ ವಿಷಯ. ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ವು ಉತ್ಕೃಷ್ಟ ಶಿಕ್ಷಣ ವನ್ನು ಸರ್ವೋತೋಮುಖ ಅಭಿವೃದ್ಧಿ ಮತ್ತು ಕಲಿಕಾ ವಿಧಾನವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದರಲ್ಲಿ ಬದ್ದವಾಗಿ ದೆ. ವಿದ್ಯಾರ್ಥಿಗಳು ಸಂಶೋದನೆ, ಉದ್ಯಮ ಶೀಲತೆ ಮತ್ತು ಕಲಿಕೆಯಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಸಾಧಿಸುವುದಕ್ಕು ವಿದ್ಯಾಲಯವು ಪ್ರೋತ್ಸಾಹ ನೀಡುತ್ತಿದೆ. ಭಾರತ ದೇಶದ ಸಿಲಿಕಾನ್ ಕಣಿವೆಯೆಂದು ಪ್ರಸಿದ್ಧ ವಾಗಿರುವ ಬೆಂಗಳೂರಿನ ಲ್ಲಿ ಉನ್ನತ ಮಟ್ಟದ ಲ್ಲಿ ತಾಂತ್ರಿಕ ಶಿಕ್ಷಣ ವನ್ನು ಬೋಧಿಸುವುದರಲ್ಲಿ ಗುರುತರವಾದ ಕೆಲಸ ವನ್ನು ಮಾಡುತ್ತಿದೆ.

aicte-institute

ತಂತ್ರಜ್ಞಾನ ವಿಭಾಗದ ಬಗ್ಗೆ

ತಂತ್ರಜ್ಞಾನ ವಿಭಾಗವು ೨೦೦೨ರಲ್ಲಿ ಸ್ಥಾಪನೆಗೊಂಡಿದ್ದು ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಕ್ಕೆ ನೊಂದಾಯಿತಗೊಂಡಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯವರಿಂದ ಅನುಮೋದನೆ ಯನ್ನು ಪಡೆದಿದೆ. ವಿದ್ಯಾರ್ಥಿ ಕೇಂದ್ರಿಕೃತ ಶಿಕ್ಷಣ ವನ್ನು ನೀಡುತ್ತಿದ್ದು ಸರ್ವೋತಮುಖ ಅಭಿವೃದ್ಧಿ ಯಲ್ಲಿ ಬೆಳೆಯಲು ಸರ್ವಾಂಗೀಣ ರೀತಿಯಲ್ಲಿ ಪ್ರೋತ್ಸಾಹ ಮತ್ತು ಸ್ಪೂರ್ತಿ ದಾಯಕ ವಾತಾವರಣವನ್ನು ನೀಡುತ್ತಿದೆ. ನಿತ್ಯ ಒಂದಿಲ್ಲೊಂದು ತರಬೇತಿಗಳನ್ನು, ವಸ್ತುಗಳ ಪರಿಚಯ, ಮತ್ತು ಕೌಶಲ್ಯಾಭಿವೃದ್ಧಿ ಕಡೆಗೆ ವಿದ್ಯಾರ್ಥಿಗಳ ಗಮನ ಸೆಳಃದು ಕಾರ್ಖಾನೆ ಗಳ ಭೇಟಿ, ಪೂರ್ವಭಾವಿ ಕೆಲಸದ ಅನುಭವ ಮತ್ತ ಯೋಜನೆಗಳಲ್ಲಿ ತೊಡಗಿಸಿ ಕೊಳ್ಳುವುದರ ಕಡೆಗೆ ಪ್ರೇರೇಪಣೆ ಮತ್ತು ಸಹಕಾರ ನೀಡುತ್ತಿದೆ. ವಿವಿಧ ರೀತಿಯ ಸಮಗ್ರ ಬೆಳವಣಿಗೆಯಲ್ಲಿ ಕಾರ್ಯಗಾರ ಗಳು, ವಿಚಾರ ಗೋಷ್ಠಿಗಳು ಮತ್ತು ಕಮ್ಮಟವನ್ನು ಆಯೋಜಿಸಿ ವಿದ್ಯಾರ್ಥಿಗಳ ಕಲಿಕಾ ಶಕ್ತಿಯನ್ನು ಹೆಚ್ಚಿಸುತ್ತಿದೆ. ತಂತ್ರಜ್ಞಾನ ವಿಭಾಗದ ಸಂಶೋಧನಾ ಕೆಂದ್ರವು ವಿದ್ಯಾರ್ಥಿಗಳಿಗೆ, ಸಂಶೋದನಾ ರ್ಥಿಗಳಿಗೆ, ಶಿಕ್ಷಕರು ಹೆಚ್ಚು ಹೆಚ್ಚು ಸಂಶೋಧನೆ ಯಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಕ್ಕು ಸಾಮ್ಯ, ಉದ್ಯಮ ಸ್ಥಾಪನೆ ಮಾಡಲು ಉತ್ತೇಜನ ನೀಡುತ್ತಿದೆ.

aicte-department